Wednesday, January 29, 2014

ANUSHAKTI SANTAANAMUKTI! ANUSHAKTI SANTAANAMUKTI!

ಪ್ರಯೊಜನವಿಲ್ಲದ ಯೋಜನ- ಅಣುಶಕ್ತಿ
ಅರ್. ಅಶೋಕ್ ಕುಮಾರ್
೨೪  ೧  ೨೦೧೪
ಇಪ್ಪತ್ತಾರ್ನೇ ತಾರೀಕು ಜನವರಿ ೨೦೧೪. ಷಿನ್ಜ಼ೊ ಆಬೆ, ಜಪಾನ್ ಪ್ರಧಾನಮನ್ಥ್ರಿಗಳು ಮುಖ್ಯ ಅತಿಥಿಗಳು. ಅವರು ಅಣುಸ್ಥಾವರಗಳನ್ನು ನಮಗೆ ಮಾರುವುದರಲ್ಲಿದ್ದಾರೆ. ಅಣುಸ್ಥಾವರಗಳನ್ನು ಕಟ್ಟುವುದಕ್ಕೆ ಸಮಾಜದಿನ್ದ ಉರ್ಜ ಮತ್ತು ವಿದ್ಯುತ್ಶಕ್ತಿಯನ್ನು ಸ್ವೀಕರಿಸುತ್ತವೆ. ಬೇಕಾದ ಖನಿಜಗಳನ್ನು ಸ್ಟೀಲ್ ಮತ್ತು ಸಿಮೆನ್ಟ್ ಪದಾರ್ಥಗಳನ್ನಾಗಿ ಮಾಡುವುದಕ್ಕೆ ಬೇಕಾದ ಉರ್ಜವನ್ನು ಕೂಡ ಸಮಾಜ  ಸಾಗಿಸುತ್ತದೆ. ಹೀಗಾಗಿ ಒನ್ನ್ದು ಸಾವಿರ ಮೆಗವಾಟ್ ಅಣುಸ್ಥಾವರ ಕಟ್ಟುವುದಕ್ಕೆ ಪ್ರತಿವರ್ಶ ಒನ್ನ್ದು ಉರ್ಜ ಉನಿಟ್ ಬೇಕಾದರೆ,ಒನ್ದುವರೆ(೧.೫) ಉನಿಟ್  ಪ್ರತಿವರ್ಶ ಈ ಅಣುಸ್ಥಾವರಗಳಿನ್ದ  ವಿದ್ಯುತ್ಶಕ್ತಿ ದೊರೆಯುತ್ತದೆ.  ಪ್ರತಿಯೊನ್ದು ಇನ್ತಹ ಅಣುಸ್ಥಾವರವನ್ನು ಕಟ್ಟಲು ಎನ್ಟು ವರ್ಶಗಳಾದರೂ ಬೇಕು. ಇದು ವಿದ್ಯುತ್ಶಕ್ತಿಯನ್ನು ಕೊಡುವುದಕ್ಕೆ ಶುರುಮಾಡಿದಮೇಲೆ ಈ ಅಣುಸ್ಥಾವರವು ಉರ್ಜ ಸಾಲವನ್ನು ತೀರ್ಪಡಿಸುವುದಕ್ಕೆ ೮/೧.೫= ೫.೩೩ ವರ್ಶಗಳು ಬೇಕು. ಇದಾದಮೇಲೆಯೇ ಈ ಅಣುಸ್ಥಾವರವು ಸಮಾಜಕ್ಕೆ (ಅಣುಕೈಗಾರಿಕೆಯನ್ನು ಬಿಟ್ಟು) ವಿದ್ಯುತ್ಶಕ್ಥಿಯನ್ನು ಕೊಡುವುದಕ್ಕೆ ಶುರುಮಾಡುತ್ತದೆ. ಆದರೆ ಈ ಕಥೆ ಇಲ್ಲಿಯೇ ಮುಗಿಯಲಿಲ್ಲ.
ಎನ್ಟು ವರ್ಶಗಳಾದಮೇಲೆ ಎರಡು ಹೊಸಾ ಅಣುಸ್ಥಾವರಗಳನ್ನು ಕಟ್ಟಲೇಬೇಕೆನ್ದು ರಾಜಕೀಯರು ತೀರ್ಮಾನಮಾಡಿದಾಗ  ಅಣುಶಕ್ತಿಯ ಕೈಗಾರಿಕೆಯು ಪ್ರತಿವರ್ಶ ಎರಡು ಉನಿಟ್ ಉರ್ಜಾವನ್ನು ಸಮಾಜದಿನ್ದ ಸ್ವೀಕರಿಸುತ್ತದೆ.  ಆಗ ವಿದ್ಯುತ್ಶಕ್ತಿಯ ಉರ್ಜಾತಕ್ಕಡಿ ಹೇಗೆ ಕಾಣುತ್ತದೆ? ಇನ್ನು ಎನ್ಟು ವರ್ಶಗಳ ತನಕ ಸಮಾಜಕ್ಕೆ ಅಣುಸ್ಥಾವರಗಳು ವಿದ್ಯುತ್ಶಕ್ತಿಯನ್ನು ಕೊಡುವುದಿಲ್ಲ. ಅರ್ಧ ಉನಿಟ್  ಜಾಸ್ತಿ ಸಮಾಜದಿನ್ದ  ಪ್ರತಿವರ್ಶ ಎನ್ಟು ವರ್ಶಗಳ ತನಕ ವಿದ್ಯುತ್ಶಕ್ತಿಯನ್ನು ನುನ್ಗುತ್ತವೆ.    ಆದುದರಿನ್ದ ಎನ್ಟು+ಎನ್ಟು= ಹದಿನಾರು ವರ್ಶಗಳು ಅಣುಸ್ಥಾವರದ ವಿದ್ಯುತ್ಶಕ್ತಿ  ಸಮಾಜಕ್ಕೆ ಸರಬರಾಜಾಗುವುದು ಮರೆಯಿರಿ! ಇಲ್ಲಿಗೆ ಸಮಸ್ಯೆ ಮುಗಿಯಲಿಲ್ಲ!  ಹದಿನಾರು ವರ್ಶಗಾದಮೇಲೆ(ತಿಳಿದುಕೊಳ್ಳಿ ೨೦೧೪ರಿನ್ದ ೨೦೩೦ ತನಕ) ನೀವು ಕಣ್ಣು ಮಿಟುಕಿಸಬೇಕು. ಯಾಕೆನ್ದರೆ ೨೦೩೦ರಲ್ಲಿ  ನಮ್ಮ ಉರ್ಜಾನಿಪುಣರು ಎನ್ಟು ಇನ್ಥಹ  ಅಣುಸ್ಥಾವರಗಳನ್ನು ಕಟ್ಟುವುದಕ್ಕೆ ಶುರು ಮಾಡಿರುತ್ತಾರೆ.  ಇರುವ ಮೂರು ಅಣುಸ್ಥಾವರಗಳು  ಪ್ರತಿವರ್ಶ ಕೇವಲ ೪.೫ ಉನಿಟ್  ಉರ್ಜವನ್ನು ದೊರೆಯುವರು. ಬೇಕಾದುದು ಪ್ರತಿವರ್ಶ ೮ ಉನಿಟ್ಗಳು. ಆದುದರಿನ್ದ ಸಮಾಜ ಅಣುಸ್ಥಾವರಗಳನ್ನು ಕಟ್ಟುವುದಕ್ಕೆ ಮಿಕ್ಕ ೩.೫ ಉನಿಟ್ಗಳನ್ನು ಪ್ರತಿವರ್ಶ ೮ ವರ್ಶಗಳತನಕ ದೊರಕಿಸಲೇಬೇಕು. ಆದುದರಿನ್ದ ೨೦೩೮ರವರೆಗೆ ಈ ಅಣುಸ್ಥಾವರಗಳು ಉರ್ಜಾ ಸಾಲವನ್ನು ಇನ್ನೂ ತಿನ್ನುತ್ತಾ ಇರುತ್ತವೆ.
೨೦೧೪ರಿನ್ದ ೨೦೩೮ರವರೆಗೆ ಅನ್ದರೆ ೨೪ ವರ್ಶಗಳ ಮುದಿ ಅಣುಸ್ಥಾವರಕಟ್ಟುವ ಯೋಜನ ಇನ್ನು ಎಶ್ಟು ವರ್ಶಗಳು ಕೆಲಸಮಾಡುತ್ತಿರುತ್ತವೆ? ಈ ಉದಾಹರಣೆಯಲ್ಲಿ ಒನ್ನ್ದು ಅಣುಸ್ಥಾವರವು ೧೬ ವರ್ಶ ವಿದ್ಯುತ್ಶಕ್ತಿ ಉತ್ಪಾದನೆ ಮಾಡಿರುವುದು.
ಆದರೆ ನೋಡಿರಿ ೨೦೧೪ರಿನ್ದ ೨೪ ವರ್ಶಗಳತನಕ ಅಣುಕೈಗಾರಿಕೆಯು ಅಣುಸ್ಥಾವರಗಳನ್ನು ಕಟ್ಟಿ ಕಟ್ಟಿ ಒನ್ದು ದೀಪವನ್ನು ಹತ್ತಿಸುವುದಕ್ಕೂ ಸಮಾಜಕ್ಕೆ ವಿದ್ಯುತ್ಶಕ್ತಿಯನ್ನು ನೀಡುವುದಿಲ್ಲ! ಏಲ್ಲ ವಿದ್ಯುತ್ಶಕ್ತಿಯೂ ಅಣುಸ್ಥಾವರದ ಉತ್ಪಾದನದಲ್ಲಿಯೇ ಮುಳುಗಿಹೋಗಿ  ಮಾಯವಾಗಿರುತ್ತವೆ.  ಈ ಇಪ್ಪತ್ತುನಾಲ್ಕು ವರ್ಶಗಳು ನಾವು ಎಶ್ಟು ದುಡ್ಡು ಖರ್ಚು ಮಾಡಿರುತ್ತೇವೆ?
ಹರಿಯಾಣದ ೨೮೦೦ ಮೆಗವಾಟ್  ಅಣುಸ್ಥಾವರಗಳಿಗೆ  ಮಾತ್ರ ೨೦೫೯೪ ಕೋಟಿ ರೂಪಾಯಿಗಳು. ಆದರೆ ಈ ಅಣುಸ್ಥಾವರಗಳಿಗೆ ವಿದ್ಯುತ್ಶಕ್ತಿಯನ್ನು ಸರಬರಾಜು ಮಾಡುವುದಕ್ಕೆ ಟ್ರಾನ್ಸ್ಮಿಶನ್ ಮತ್ತು ದಿಸ್ಟ್ರಿಬ್ಯುಶನ್ ಯನ್ಟ್ರಗಳು ಬೇಕು. ಹಾಗೂ ಕ್ಶಣ   ಕ್ಶಣ  ಸಮಾಜವು ಕೇಳಿದಶ್ಟು ವಿದ್ಯುತ್ಶಕ್ತಿಯನ್ನು ಅನಾಹುತವಿಲ್ಲದೆ ದೊರಕಿಸುವುದಕ್ಕೆ ಅಣೆಕಟ್ಟೆಯ ಮೂಲಕ ಉರ್ಜ ಉತ್ಪಾದನೆಮಾಡುವ ಸ್ಥಾವರಗಳನ್ನು ಕೂಡ ಕಟ್ಟಬೇಕು. ಅಲ್ಲದೆ ಅಣುಸ್ತಾವರಗಳ ಚಕ್ರವು ಉತ್ಪಾದನೆ ಮಾಡುವ ಭಯನ್ಕರವಾದ ಅಣುಕಚ್ಚಡವನ್ನು ತಣ್ಣಗೆ ಸ್ಟೀಲ್ ಟ್ಯಾನ್ಕುಗಳಲ್ಲಿ ಸುರಕ್ಶಿತವಾಗಿ ಲಕ್ಶಾನುಗಟ್ಲೆ ವರ್ಶಗಳ ಕಾಲ ಇಟ್ಟಿರುವುದಕ್ಕೆ ಮತ್ತು ಆಯಿಸಾದ ಅಣುಸ್ಥಾವರಗಳನ್ನು ಸುರಕ್ಶಿತ ಮಾಡುವುದಕ್ಕೆ  ಹಾಗೂ ಇವೆಲ್ಲವನ್ನು ಜೋಪಾನವಾಗಿ ಸಾವಿರಾರುವರ್ಶಗಳು ನೋಡಿಕೊಳ್ಳುವುದಕ್ಕೆ ಬೇಕಾದ ಖರ್ರ್ಚುಗಳನ್ನೆಲ್ಲಾ ಸೀರಿಸಿದರೆ ೨೮೦೦ ಮೆಗವಾಟ್ಗೆ  ರೂ ಒನ್ದುಲಕ್ಶ ಕೋಟಿ ಬೇಕಾಗಬಹುದು.
ಅಧಿಕಾರಿಗಳು ೩೩೭೪೪ ಮೆಗವಾಟ್ ಅಣುವಿದ್ಯುತ್ಶಕ್ತಿ ಯೋಜನೆಯ ಗುರಿಯಾಗಿಟ್ಟಿದ್ದಾರೆ. ಇದಕ್ಕೆ ಖರ್ಚ ರೂ ೧೨ ಲಕ್ಶ ಕೋಟಿ!
ಆದರೆ ಈ ಅಣುಸ್ಥಾವರಗಳು- ಕೈಗ,ಘೋರಖ್ಪುರ್, ಕೂಡನ್ಕುಲಮ್, ಜೈತಾಪುರ್ ಮತ್ತು ಕೋವಾಡ- ಪ್ರತಿವರುಶ ೮೭೪೦೦ ಅಧಿಕ ಕ್ಯಾನ್ಸರ್ ಸಾವುಗಳು ಅಣುಸ್ಥಾವರದ ಸಾಮಾನ್ಯ ರೂಪದ ನಡತೆಯಲ್ಲೇ("ನೊರ್ಮಲ್  ಆಪರೆಶನ್") ಆಗಲಿದೆ(ನೋಡಿ Kudankulam and cancer deaths google search ನ ಮೂಲಕ). ಒನ್ದು ಸಾವಿಗೆ ಒನ್ದು ಕೋಟಿ ರೂಪಾಯಿಗಳ ಪ್ರಕಾರ ರೂ ೮೭೪೦೦ ಕೋಟಿ ಖರ್ಚು ಪ್ರತಿವರ್ಶ ಸಮಾಜದ ಹೊರೆಯಾಗುತ್ತದೆ. ಇಪ್ಪತ್ತು ವರ್ಶಗಳಿಗೆ ರೂ ೧.೭೫ ಲಕ್ಶ ಕೋಟಿ ಕೆನ್ಸರ್ರ್ ಪೀಡಿತದ ಖರ್ಚು!  ಸರ್ಕಾರವು ರೂ ೧೪ ಲಕ್ಶ ಕೋಟಿ "Non-Performing Liability assets"  ಅನ್ದರೆ ಕೆಲಸಕ್ಕೆ ಬಾರದ ಭ್ಹನ್ಜೆ ವಸ್ತುಗಳನ್ನು ಜನರಿಗೆ ಹೊರಿಸುತ್ತಿದ್ದಾರೆ.
ಇವಲ್ಲಾ ವಿದ್ಯುತ್ಶತ್ಕಿಯನ್ನು ನೀಡುವುದಕ್ಕೆ ೪೦ ವರ್ಶಗಲಾದರೂ ಬೇಕು. ಆಲ್ಲಿಯ ತನಕ ಬಡವನ ತಲೆಗೆ ಸಾಲವ ಹೊರಿಸಿ ಅರಮನೆಗಳನೇ ಕಟ್ಟುವಿರಿ.  ಇಶ್ಟೊನ್ದು ಖ್ಹರ್ಚು, ಶೂನ್ಯ ವಿದ್ಯುತ್ತು, ಜನರಿಗೆ! ವಿದ್ಯುತ್ತಿನ ಕ್ರಯ? ಅನನ್ತ- Infinity! Price of nuclear electricity = Infinity!
&&&&&&&&&&&&&&&   
    


   
    



    


No comments: